ಮುಖದ ಸೌಂದರ್ಯ ಹೆಚ್ಚಿಸಲು ಇಲ್ಲಿದೆ ಮನೆಮದ್ದು | White Face Tips in Kannada | YOYO TV Kannada Health-ಉತ್ತರ ಕರ್ನಾಟಕದಿಂದ ಬಿಎಸ್ ವೈ ಸ್ಪರ್ಧೆ ! | B S Yeddyurappa to Contest from North Karnataka | YOYOKannada-ಜ್ವರ ಬಂದ ತಕ್ಷಣ ಮಾಡಬೇಕಾದ ಮನೆಮದ್ದು | Home Remedies for Fever in Kannada | YOYO TV Kannada-ಸ್ನಾನ ಯಾವಾಗ ಮಾಡಿದರೆ ಒಳ್ಳಿಯದು ಎಂದು ನಿಮಗೆ ಗೊತ್ತಾ ? ಇಲ್ಲವಾದಲ್ಲಿ ಈ ವೀಡಿಯೋ ನೋಡಿ | YOYO TV Kannada-ಬಿಗ್ ಬಾಸ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಶೀಘ್ರದಲ್ಲೇ ಆರಂಭ | Bigg Boss Kannada Date Fixed | YOYOKannada-ಕೆಜಿಎಫ್ ಚಿತ್ರ ಮೋಶನ್‌ ಟೀಸರ್ | KGF Movie Motion Teaser | #KGF | YOYO TV Kannada-ಈ ಸಸಿಗಳು ನಿಮ್ಮ ಮನೆಯಲ್ಲಿದ್ದರೆ ನೀವೇ ಅದೃಷ್ಟವಂತರು | Lucky Plants in Front of the House | YOYO TV Kannada-ಬುಧವಾರ ನಿಮ್ಮ ಅದೃಷ್ಟದ ದಿನವೇ ? | ಇಂದಿನ ರಾಶಿಭವಿಷ್ಯ 30 Wednesday 2017 | YOYO TV Kannada Astrology-ಕರಿಬೇವಿನಿಂದ ಹೀಗೆ ಮಾಡಿದರೆ, ಜನ್ಮದಲ್ಲಿ ಕೂದಲು ಉದುರುವುದಿಲ್ಲ & ದಟ್ಟವಾಗು ಬೆಳಿಯುತ್ತದೆ | YOYO Kannada Health-Beauty Tips for Face in Kannada | ಬೇಕಿಂಗ್ ಸೋಡಾನಿಂದ ಹೀಗೆ ಮಾಡಿದರೆ ಮುಖ ಬೆಳ್ಳಗೆ ಹೊಳೆಯುತ್ತದೆ | YOYOKannada
ಭಕ್ತಿ

ಈ ಸಂಖ್ಯೆಯಂದು ಹುಟ್ಟಿದರೆ ಅದೃಷ್ಟವು ನಿಮ್ಮನ್ನು ಹಿಂಬಾಲಿಸುವುದು

Numerology Number Predictions 1 to 9 ಈ ಸಂಖ್ಯೆಯಂದು ಹುಟ್ಟಿದರೆ ಅದೃಷ್ಟವು ನಿಮ್ಮನ್ನು ಹಿಂಬಾಲಿಸುವುದು
ಈ ಸಂಖ್ಯೆಯಂದು ಹುಟ್ಟಿದರೆ ಅದೃಷ್ಟವು ನಿಮ್ಮನ್ನು ಹಿಂಬಾಲಿಸುವುದು

ಪುರಾತನ ಸಂಖ್ಯಾ ಶಾಸ್ತ್ರದ ಪ್ರಕಾರ ನೀವು ಹುಟ್ಟಿದ ದಿನಾಂಕ ನಿಮ್ಮ ಆರ್ಥಿಕ ಪರಿಸ್ಥಿತಿಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಸಂಪತ್ತು ಹಾಗೂ ವಿಜಯದ ರಹಸ್ಯಗಳನ್ನು ಹುಟ್ಟಿದ ದಿನಾಂಕದ ಸಂಖ್ಯೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಜೀವನದಲ್ಲಿ ಗೆಲುವನ್ನು ಸಾಧಿಸಿ ಪ್ರಶಾಂತವಾಗಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಅಂದುಕೊಂಡ ಹಾಗೆ ಎಲ್ಲರೂ ಆ ಫಲಿತವನ್ನು ದಕ್ಕಿಸಿಕೊಳ್ಳಲಾರರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕ, ವಾರ, ಸ್ಥಳ, ತಿಂಗಳು ಹಾಗೂ ವರ್ಷ ಇವುಗಳ ಆಧಾರದ ಮೇಲೆ ಪ್ರತಿಯೊಬ್ಬರ ಜನ್ಮಾಪಟ್ಟಿಕೆಯನ್ನು ಬರೆಯಲಾಗುತ್ತದೆ. ಇದು ಜೀವನಕ್ಕೆ ಸಂಬಂಧಿಸಿದ ಮುಖ್ಯವಾದ ವಿಷಯಗಳನ್ನು ತಿಳಿಸುತ್ತದೆಯೆಂದು ಜ್ಯೋತಿಷಿಗಳು ಹೇಳುತ್ತಾರೆ. ಇದನ್ನು ನೀವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷದ ಸಂಖ್ಯೆಗಳನ್ನು ಕೂಡಿಸಿ ಲೆಕ್ಕ ಹಾಕುತ್ತಾರೆ. ಉದಾಹರಣೆಗಾಗಿ ಒಬ್ಬ ವ್ಯಕ್ತಿ 19-11-1985 ರಂದು ಹುಟ್ತಿರುವನು ಎಂದುಕೊಂಡರೆ, ಅವರ ಅದೃಷ್ಟ ಸಂಖ್ಯೆ ಈ ರೀತಿಯಾಗಿರುತ್ತದೆ. ಹೇಗೆಂದರೆ, ಅವರು ಹುಟ್ಟಿದ ದಿನಾಂಕ 19 ಆದ್ದರಿಂದ 1+9, ತಿಂಗಳು 11 ಎಂದರೆ, 1+1, ಇನ್ನೂ ವರ್ಷ 1985 ಆಗಿದ್ದಲ್ಲಿ 1+9+8+5 ಇವುಗಳನ್ನು ಕೂಡಿಸಬೇಕು. ಹೇಗೆಂದರೆ, 1+9+1+1+1+9+8+5 ಅಂದರೆ, ತಾರೀಖು, ತಿಂಗಳು ಹಾಗೂ ವರ್ಷದಲ್ಲಿರುವ ಸಂಖ್ಯೆಗಳನ್ನು ಕೂಡಿಸಿದಾಗ ಬರುವ ಸಂಖ್ಯೆ 35 ಇದನ್ನು ಕೂಡಿದಾಗ ಅಂದರೆ, 3+5 ಈ ಅಂಕೆಗಳನ್ನು ಕೂಡಿದರೆ ಬರುವ ಸಂಖ್ಯೆಯು 8. ಹೀಗೆ ಬಂದ ಸಂಖ್ಯೆಯ ಆಧಾರದ ಮೇಲೆ ನಿಮ್ಮ ಜಾತಕವಿರುತ್ತದೆಯೆಂದು ಪ್ರಾಚೀನ ಗ್ರಂಥಗಳಲ್ಲಿ ಹೇಳಲಾಗುತ್ತಿದೆ.

ಅದರಲ್ಲಿ ಹುಟ್ಟಿದ ಸಂಖ್ಯೆ 1 ಆದಲ್ಲಿ ನಿಮ್ಮ ಸುತ್ತ ಇರುವವರನ್ನು ಸಂತೋಷವಾಗಿರಿಸುತ್ತೀರ. ಭಾನುವಾರ ಸಿಹಿ ತಿನಿಸುಗಳನ್ನು ತಿನ್ನಬೇಕು, ಪ್ರತಿದಿನವೂ ಸೂರ್ಯ ನಮಸ್ಕಾರ ಮಾಡಿದರೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಹುಟ್ಟಿದ ಸಂಖ್ಯೆಯು 2 ಆದಲ್ಲಿ ಸೋಮವಾರದಂದು ಉಪವಾಸ ಮಾಡಬೇಕು ಕನಿಷ್ಟ ಪಕ್ಷ ಉಪ್ಪು ಸೇವಿಸಬಾರದು. ಹುಟ್ಟಿದ ದಿನದಲ್ಲಿ 3 ಇದ್ದರೆ ಗುರುವಾರದಂದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮ್ಮ ಅದೃಷ್ಟ ದುಪ್ಪಟ್ಟಾಗುವದು. ಹುಟ್ಟಿದ ಸಂಖ್ಯೆಯಲ್ಲಿ 4 ಇದ್ದರೆ, ಗಣೇಶನನ್ನು ಪೂಜಿಸಬೇಕು ಇದರಿಂದ ಜೀವನದಲ್ಲಿಯ ಪ್ರತಿಕೂಲತೆಗಳು ತೊಲಗಿ ಹೋಗುತ್ತವೆ. ಹುಟ್ಟಿದ ಸಂಖ್ಯೆಯಲ್ಲಿ 5 ಇದ್ದರೆ ಪ್ರತಿ ಬುಧವಾರ ಆಕಳಿಗೆ ಹಸಿ ಹುಲ್ಲು, ಬೆಲ್ಲವನ್ನು ಅರ್ಪಿಸಬೇಕು. ಹಾಗೂ ವಿಘ್ನೇಶ್ವರ ಸ್ತುತಿಯನ್ನು ಪಠಿಸಿದಲ್ಲಿ ಜೀವನದಲ್ಲಿ ವಿಜಯಗಳು ನಿಮ್ಮ ಹಿಂದೆಯೇ ಇರುತ್ತವೆ. ಇನ್ನೂ ನಿಮ್ಮ ಹುಟ್ಟಿದ ದಿನದಲ್ಲಿ 6 ಇದ್ದರೆ ಗುರುವಾರದಂದು ಸಿಹಿಯನ್ನು ಸೇವಿಸಿ ಲಕ್ಷ್ಮಿ ಅಷ್ಟೋತ್ತರ ಸ್ಮರಿಸಿದಲ್ಲಿ ಆರ್ಥಿಕಾಭಿವೃದ್ಧಿಯಾಗುವುದು ಎಂದು ಹೇಳಲಾಗುತ್ತಿದೆ. ಹುಟ್ಟಿದ ದಿನದಲ್ಲಿ 7 ಇದ್ದರೆ ಕರೀಬಣ್ಣದ ನಾಯಿಗೆ ಆಹಾರವನ್ನು ಸಲ್ಲಿಸಿ ಶಿವನಿಗೆ ಅಭಿಷೇಕ ಮಾಡಿದರೆ ಒಳ್ಳೆಯದಾಗುತ್ತದೆ. ಹುಟ್ಟಿದ ಸಂಖ್ಯೆ 8 ಆದಲ್ಲಿ ಅರಳೀ ಮರದಡಿಯಲ್ಲಿ ದೀಪವನ್ನು ಹಚ್ಚಬೇಕು, ಇನ್ನು ಧೂಪದಿಂದ ಶನಿ ದೇವರನ್ನು ಪೂಜಿಸುವುದಲ್ಲದೆ, ಮದ್ಯಪಾನ ಹಾಗೂ ಮಾಂಸಾಹಾರವನ್ನು ಪೂರ್ತಿಯಾಗಿ ಬಿಡಬೇಕು. ಹುಟ್ಟಿದ ಸಂಖ್ಯೆಯಲ್ಲಿ 9 ಇದ್ದರೆ ಪ್ರತಿ ಮಂಗಳವಾರ ಆಂಜನೇಯನನ್ನು ಸ್ಮರಿಸಿ ಹನುಮಾನ್ ಚಾಲೀಸ ಪಠಿಸಿ. ಇದರ ಪ್ರಕಾರ ನಿಮ್ಮ ಜನ್ಮ ಸಂಖ್ಯೆಗೆ ಅನುಗುಣವಾಗಿ ಪದ್ಧತಿಯನ್ನು ಪಾಠಿಸಿದ್ದೇ ಆದರೆ, ಆರ್ಥಿಕ ಸಮಸ್ಯೆಗಳು ತೊಲಗಿ ಅದೃಷ್ಟವಂತರಾಗಿ ಬಾಳುತ್ತೀರ ಎಂದು ನಮ್ಮ ಸಂಖ್ಯಾಶಾಸ್ತ್ರವು ಹೇಳುತ್ತಿದೆ.

Click to comment

Leave a Reply

Your email address will not be published. Required fields are marked *

To Top